👉ಪ್ರಯೋಗಾಲಯ ಉಪಕರಣಗಳು
👉Sciences experiments
👉 ಸರಳ ವಿಜ್ಞಾನ ಕೈಪಿಡಿ
ದಾರ ಕಟ್ಟದೇ ಮಂಜು ಮೇಲೆತ್ತು
ವಿಧಾನ:
1. ಮಂಜುಗಡ್ಡೆಯ ದೊಡ್ಡ ತುಂಡೊಂದನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿಡಿ.
2. ಚಿತ್ರದಲ್ಲಿ ತೋರಿಸಿದಂತೆ ಮಂಜುಗಡ್ಡೆಯ ಮಧ್ಯದಲ್ಲಿ ದಾರವನ್ನಿಡಿ.
3. ಮಂಜುಗಡ್ಡೆಯ ಮೇಲಿರುವ ದಾರದ ಮೇಲೆ ಸ್ವಲ್ಪ ಉಪ್ಪು ಹಾಕಿ.
4. ಸ್ವಲ್ಪ ಸಮಯದ ನಂತರ ಸಾವಕಾಶವಾಗಿ ಒಂದು ದಾರದ ತುದಿಯನ್ನು ಹಿಡಿದು ಮೇಲೆತ್ತಿ.
ಪ್ರಶ್ನೆ:
1. ಉಪ್ಪು ಹಾಕದೆ, ಕೇವಲ ದಾರವನ್ನು ಮಂಜು ಗಡ್ಡೆಯ ಮೇಲಿಟ್ಟು ದಾರವನ್ನು ಮೇಲೆತ್ತಿದಾಗ ಏನಾಗು
ತ್ತದೆ?
2. ದಾರದ ಗುಂಟ ಉಪ್ಪನ್ನು ಹಾಕಿ, ಅನಂತರ ದಾರವನ್ನೆತ್ತಿದಾಗ ಏನಾಗುತ್ತದೆ, ಏಕೆ?
3. ಯಾವ ತಾಪಮಾನದಲ್ಲಿ ಮಂಜುಗಡ್ಡೆ ಕರಗುತ್ತದೆ ?
ಉತ್ತರ:
1. ಮಂಜುಗಡ್ಡೆ ದಾರಕ್ಕೆ ಅಂಟಿಕೊಳ್ಳುವುದಿಲ್ಲ.
2. ಉಪ್ಪು ನೀರಿನ ದ್ರವದ ಬಿಂದು (Melting Point) ಹಾಗೂ ಘನೀಕರಣ ಬಿಂದು (Freezing Point) ಶುದ್ಧ ನೀರಿಗಿಂತ ಕಡಿಮೆ. ಆದ್ದರಿಂದ ದಾರದ ಮೇಲೆ ಉಪ್ಪನ್ನು ಹಾಕಿದಾಗ ಅದರ ಪಕ್ಕದಲ್ಲಿಯ ಮಂಜುಗಡ್ಡೆ ಕರಗಿ ನೀರಾಗುತ್ತದೆ ಹಾಗೂ ದಾರ ನೀರಿನಲ್ಲಿ ಮುಳುಗುತ್ತದೆ. ಸ್ವಲ್ಪ ಸಮಯದಲ್ಲಿಯೇ ಕರಗಿದ ಮಂಜುಗಡ್ಡೆ ಗಟ್ಟಿಯಾಗುತ್ತದೆ. ದಾರ ಮಂಜುಗಡ್ಡೆಗೆ ಗಟ್ಟಿಯಾಗಿ ಅಂಟಿಕೊಳ್ಳೊತ್ತದೆ. ದಾರದ ಒಂದು ತುದಿಯನ್ನು ಹಿಡಿದು ಮೇಲೆತ್ತಿದಾಗ ಮಂಜುಗಡ್ಡೆಯೂ ಮೇಲೇಳುತ್ತದೆ.
3. ೦ (ಸೊನ್ನೆ ) ಡಿಗ್ರಿ ಸೆಲ್ಸಿಯಸ್‌ನಲ್ಲಿ ಮಂಜುಗಡ್ಡೆ ಕರಗುತ್ತದೆ.
ತಂಪು ದೇಶಗಳಲ್ಲಿ ಛಳಿಗಾಲದಲ್ಲಿ ರಸ್ತೆಗಳು ಮಂಜುಗಡ್ಡೆಯಿಂದ ಆವೃತವಾಗಿದ್ದರೆ, ವಾಹನ ನಡೆಸುವುದು ಕಠಿಣ. ಮಂಜುಗಡ್ಡೆಯ ಮೇಲೆ ವಾಹನದ ಭಾರ ಬೀಳುವುದರಿಂದ ನೀರಿನ ಘನೀಕರಣ ಬಿಂದು ತಗ್ಗಿ ಟೈರ್‌ಗಳ ಕೆಳಗಿನ ಮಂಜುಗಡ್ಡೆ ಕರಗಿ ನೀರಾಗುತ್ತದೆ. ಆಗ ವಾಹನಗಳು ಜಾರಿ ಬೀಳುತ್ತವೆ. ಮಂಜುಗಡ್ಡೆಯ ಮೇಲೆ ಉಪ್ಪು ಸುರುವುದರಿಂದ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುತ್ತದೆ. ಆಗ ವಾಹನಗಳು ಮಂಜುಗಡ್ಡೆಯ ಮೇಲೆ ಚಲಿಸಿದರೂ ಕೂಡ ಮಂಜುಗಡ್ಡೆ ಮತ್ತೆ ಕರಗುವುದಿಲ್ಲ. ಹೀಗಾಗಿ ವಾಹಗಳು ಸರಳವಾಗಿ ಚಲಿಸುತ್ತವೆ.
ಚೆರಿ ಗುಂಡು ಜಾರಿದ್ದೇಕೆ?
ಬೇಕಾಗುವ ಸಾಮಗ್ರಿಗಳು: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳು, ಬೀಕರ್, ಬಿಸಿ ನೀರು, ಮೋಂಬತ್ತಿ, 3 ಚಿಕ್ಕ ಚೆರಿ ಗುಂಡುಗಳು.
ವಿಧಾನ: ಒಂದೇ ಅಳತೆಯ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಚಮಚಗಳನ್ನು ತೆಗೆದುಕೊಳ್ಳಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳ ಹಿಡಿಕೆಗಳ ತುದಿಯ ಕಡೆಗೆ ಮೇಣವನ್ನು ಉಪಯೋಗಿಸಿ, ಚಿಕ್ಕ ಚೆರಿ ಗುಂಡುಗಳನ್ನು ಅಂಟಿಸಿ. ಚಿತ್ರದಲ್ಲಿ ತೋರಿಸಿದಂತೆ ಮೂರೂ ಚಮಚಗಳನ್ನು ಏಕ ಕಾಲಕ್ಕೆ ಬಿಸಿ ನೀರಿರುವ ಗ್ಲಾಸಿನಲ್ಲಿಡಿ.
ಪ್ರಶ್ನೆ: ಚೆರಿ ಗುಂಡುಗಳಿಗೆ ಏನಾಗುತ್ತದೆ? ಯಾಕೆ?
ಉತ್ತರ: ಎಲ್ಲ ಲೋಹಗಳು ಒಳ್ಳೆಯ ಉಷ್ಣ ವಾಹಕಗಳು. ಅಲ್ಯೂಮಿನಿಯಂ ಉತ್ತಮ ಉಷ್ಣವಾಹಕ. ಇದರ ಮುಖಾಂತರ ಉಷ್ಣವು ತೀವ್ರ ಗತಿಯಲ್ಲಿ ವಹನವಾಗಿ
ಮೋಂಬತ್ತಿಯ ಮೇಣವನ್ನು ಕರಗಿಸುತ್ತದೆ. ಹೀಗಾಗಿ ಇದಕ್ಕೆ ಅಂಟಿಸಿದ ಲೋಹದ ಗುಂಡು ಮೊದಲು ಕೆಳಗೆ ಬೀಳುತ್ತದೆ. ಸ್ಟೀಲ್ ಸಂಯುಕ್ತ ಲೋಹ. ಇಲ್ಲಿ ಉಷ್ಣವು ಸ್ವಲ್ಪ ಸಾವಕಾಶವಾಗಿ ವಹನವಾಗುತ್ತದೆ. ಆದ್ದರಿಂದ ಲೋಹದ ಗುಂಡು ಸ್ವಲ್ಪ ತಡವಾಗಿ ಕಳಚಿ ಬೀಳುತ್ತದೆ. ಪ್ಲಾಸ್ಟಿಕ್ ಉಷ್ಣದ ಅವಾಹಕ/ಮಂದವಾಹಕ. ಇದಕ್ಕೆ ಅಂಟಿಸಿದ ಲೋಹದ ಗುಂಡು ಕಳಚುವುದಿಲ್ಲ. ಆದ್ದರಿಂದ ಪ್ರೆಶರ್ ಕುಕ್ಕರ್‌ಗಳಿಗೆ ಪ್ಲಾಸ್ಟಿಕ್ ಹಿಡಿಕೆಯನ್ನು ಜೋಡಿಸಿರುತ್ತಾರೆ. ಪಾತ್ರೆಗಳಲ್ಲಿಯ ಬಿಸಿ ಪದಾರ್ಥವನ್ನು ಕಲಕಿಸುವಾಗ ಮರದ ಸೌಟುಗಳನ್ನು ಬಳಸುವುದೂ ಉಂಟು. ಯಾಕೆಂದರೆ ಮರವೂ ಕೂಡ ಉಷ್ಣದ ಮಂದವಾಹಕ
ಬೆಂಕಿ ಕಡ್ಡಿಯ ಜ್ವಾಲೆ
ಬೇಕಾಗುವ ಸಾಮಗ್ರಿಗಳು: ಮೂರು ಪ್ರನಾಳಗಳು, ಸತುವಿನ ತುಂಡು(Zn), ಅಮೃತಶಿಲೆಯ ಚೂರುಗಳು(CaCO3), ಹೈಡ್ರೊ ಕ್ಲೊರಿಕ್ ಆಮ್ಲ (HCl), ಪೊಟ್ಯಾಸಿಯಂ ಕ್ಲೊರೇಟ್(KClO3), ಬೂದಿ, ಬೆಂಕಿ ಪೆಟ್ಟಿಗೆ,
ವಿಧಾನ: ಮೂರು ಪ್ರನಾಳಗಳನ್ನು ತೆಗೆದುಕೊಳ್ಳಿ. ಮೊದಲ ಪ್ರನಾಳದಲ್ಲಿ ಸತುವಿನ ತುಂಡುಗಳನ್ನು ಹಾಗೂ ಎರಡನೆಯದರಲ್ಲಿ ಅಮೃತಶಿಲೆಯ ಚೂರುಗಳನ್ನು ಹಾಕಿ ಅವಕ್ಕೆ ೫ ಸಿಸಿ ದುರ್ಬಲ ಹೈಡ್ರೊಕ್ಲೊರಿಕ್ ಆಮ್ಲವನ್ನು ಹಾಕಿ. 3ನೇ ಪ್ರನಾಳದಲ್ಲಿ ಸ್ವಲ್ಪ ಪೊಟ್ಯಾಸಿಯಂ ಕ್ಲೊರೇಟನ್ನು ಬೂದಿಯೊಂದಿಗೆ ಬೆರಸಿ ಹಾಕಿ.
ಪ್ರಶ್ನೆ:
1. ಮೊದಲ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ ಜೋರಾಗಿ ಅಲುಗಾಡಿಸಿ. ತಕ್ಷಣ ಅದರ ಬಾಯಿ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿಬಿಟ್ಟು ನೋಡಿ. ಏನಾಯಿತು?
2. ಎರಡನೆಯ ಪ್ರನಾಳದ ಬಾಯಿಯ ಹತ್ತಿರ ಜ್ವಾಲೆಯುಳ್ಳ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಇಳಿ ಬಿಡಿ. ಏನಾಯಿತು?
3. ಮೂರನೆಯ ಪ್ರನಾಳವನ್ನು ಕಾಯಿಸಿ, ಅನಂತರ ಅದರಲ್ಲಿ ಜ್ವಾಲೆ ರಹಿತ ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು ಬಿಡಿ. ಏನಾಯಿತು? ಯಾಕೆ?
ಉತ್ತರ: 1. ಮೊದಲ ಪ್ರನಾಳದಲ್ಲಿ ಹೈಡ್ರೊಜನ್ ಅನಿಲವು ಬಿಡುಗಡೆ ಯಾಗುತ್ತದೆ. Zn+2 HCl → ZnCl2 + H2 ಹೈಡ್ರೊಜನ್ ದಹನಕಾರಿ ಅನಿಲವಾದ್ದರಿಂದ ಪ್ರನಾಳದ ಬಾಯಿಯ ಹತ್ತಿರ ಉರಿಯುವ ಬೆಂಕಿ ಕಡ್ಡಿ ಹಿಡಿದಾಗ ಸ್ಫೋಟದ ಶಬ್ದ ಬರುತ್ತದೆ.
2. ಎರಡನೆಯ ಪ್ರನಾಳದಲ್ಲಿ ಕಾರ್ಬನ್‌ಡೈಆಕ್ಸೈಡ್ ಅನಿಲ ಬಿಡುಗಡೆಯಾಗುತ್ತದೆ. CaCO3 + 2 HCl → CaCl2+CO2+H2O.
ಇದು ಬೆಂಕಿಯನ್ನು ಆರಿಸುತ್ತದೆ.
3. ಮೂರನೆಯ ಪ್ರನಾಳದಲ್ಲಿ ಆಕ್ಸಿಜನ್ ಅನಿಲ ಬಿಡುಗಡೆಯಾಗುತ್ತದೆ. ಇದು ದಹನ ಕ್ರಿಯೆಗೆ ಸಹಕಾರಿ. ಆದ್ದರಿಂದ ಬೆಂಕಿ ಕಡ್ಡಿ ಜ್ವಾಲೆಯಾಗಿ ಉರಿಯುತ್ತದೆ

Excellent work in science
ReplyDeleteGood job sir
ReplyDeleteExcellent an work in conduct an expriement very useful in every day available simple material in our daily life 🙏
ReplyDeletegreat work sir very much useful and informative for both teachers and students
ReplyDelete